ಸಾಮಾಜಿಕ ಮಾಧ್ಯಮ ಬಳಕೆ ಇತ್ತೀಚೆಗೆ ಗೀಳಾಗಿ ಪರಿಣಮಿಸಿರುವ ಕಾರಣ16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸುವ ಮಸೂದೆಯನ್ನು ಆಸ್ಟ್ರೇಲಿಯಾದ ಜನಪ್ರತಿನಿಧಿಗಳ ಸಭೆ ಬುಧವಾರ ಅಂಗೀಕರಿಸಿದೆ.
ಈ ಮಸೂದೆಯು ಟಿಕ್ನಾಕ್, ಫೇಸ್‌ಬುಕ್, ಸ್ಪ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳು ಮಕ್ಕಳ ಖಾತೆಗಳನ್ನು ಹೊಂದುವುದನ್ನು ನಿಷೇಧಿಸಿದೆ. ಅಲ್ಲದೇ ನಿಯಮ ಉಲ್ಲಂಘಿಸಿದ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಲು ನಿರ್ಧರಿಸಿದೆ.
ಜನಪ್ರತಿನಿಧಿಗಳ ಸಭೆಯಲ್ಲಿ ಮಸೂದೆ ಅಂಗೀಕಾರವಾದ ಬೆನ್ನಲ್ಲೇ ಅನುಮೋದನೆಗಾಗಿ ಮಸೂದೆಯನ್ನು ಸೆನೆಟ್‌ಗೆ ವರ್ಗಾಯಿಸಲಾಗಿದೆ.ಮಸೂದೆ ಕಾಯ್ದೆಯಾಗುವ ಮುನ್ನ ವಯಸ್ಸಿನ ನಿರ್ಬಂಧಗಳನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಒಂದು ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ ತಿಳಿದು ಬಂದಿದೆ.