ನವದೆಹಲಿ: ‘ಸರ್ಕಾರ ನೀಡುವ ಮೀಸಲಾತಿ ಲಾಭ ಪಡೆಯುವ ಉದ್ದೇಶಕ್ಕಾಗಿ ಮತಾಂತರವಾಗುವುದು ಸಂವಿಧಾನಕ್ಕೆ ಮಾಡುವ ವಂಚನೆ’ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಧಾರ್ಮಿಕ ಮತಾಂತರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ರುವ ಸುಪ್ರೀಂಕೋರ್ಟ್ ‘ಸರ್ಕಾರ ನೀಡುವ ಮೀಸಲಿನ ಲಾಭಕ್ಕಾಗಿ, ಧಾರ್ಮಿಕ ನಂಬಿಕೆಯಿರದೇ ಮತ್ತೊಂದು ಧರ್ಮಕ್ಕೆ ಮತಾಂತರ ವಾಗುವುದು ಸಂವಿಧಾನದ ಮಾಡುವ ವಂಚನೆ. ಮತಾಂತರದ ಉದ್ದೇಶ ಮೀಸಲಾತಿ ಪಡೆಯುವುದಾಗಿದ್ದರೆ, ಅದನ್ನು ಅನು ಮೋದಿಸಲಾಗುವುದಿಲ್ಲ. ಇಂತಹ ಉದ್ದೇಶಗಳು ಸಾಮಾಜಿಕ ನೀತಿಯನ್ನು ಸೋಲಿಸುತ್ತದೆ’ ಎಂದಿದೆ.
ಕಳೆದ ಜನವರಿಯಲ್ಲಿ, ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ ಮಹಿಳೆ ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕೆ ಕೋರ್ಟ್ ಮೊರೆ ಹೋಗಿದ್ದರು. ಆಕೆ ಧರ್ಮದ ಮೇಲೆ ನಂಬಿಕೆ ಇರದೇ ಉದ್ಯೋಗ ಪಡೆಯಲು ಮತಾಂತರವಾಗಿದ್ದಾಳೆ ಎನ್ನುವ ಕಾರಣಕ್ಕೆ ಮದ್ರಾಸ್ ಹೈಕೋರ್ಟ್ ಪ್ರಮಾಣಪತ್ರ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.