ಬಿಲಾಸ್‌ಪುರ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅನೂನ್ಯವಾಗಿ ಸಂಸಾರ ನಡೆಸಬೇಕಿದ್ದ ಪತ್ನಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾನಸಿಕ ನೆಮ್ಮದಿ ಕೆಡಿಸಿದ ಹಿನ್ನೆಲೆಯಲ್ಲಿ ಪತಿ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಆ ವ್ಯಕ್ತಿಗೆ ವಿಚ್ಛೇದನ ನೀಡುವಂತೆ ಆದೇಶ ಹೊರಡಿಸಿದೆ.
ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ
ಬಿಲಾಸ್‌ಪುರ ಹೈಕೋರ್ಟ್ ತನ್ನ ತೀರ್ಪಿನಲ್ಲಿ “ಒಂದೇ ಸೂರಿನಡಿ ಒಟ್ಟಿಗೆ ವಾಸಿಸುತ್ತಿದ್ದರೂ, ಯಾವುದೇ ಕಾರಣವಿಲ್ಲದೆ ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಪತ್ನಿ ವಾಸವಾಗಿರುವುದು ಪತಿಗೆ ಮಾನಸಿಕ ಹಿಂಸೆಯಾಗುತ್ತದೆ” ಎಂದು ಹೇಳಿದೆ.
ಬೆಮೆತಾರಾ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಸಮರ್ಥಿಸಿಕೊಂಡ ವಿಭಾಗೀಯ ಪೀಠ, ತನ್ನ ಪತ್ನಿಯೊಂದಿಗೆ ಸಾಕಷ್ಟು ಸಮಯದಿಂದ ಜಗಳವಾಡಿದ್ದ ವ್ಯಕ್ತಿಗೆ ವಿಚ್ಛೇದನ ಕರುಣಿಸಿದೆ.ಮಹಿಳೆಯ ವರ್ತನೆಯಿಂದ ದಂಪತಿ ಒಟ್ಟಿಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಮನೆಯವರು ಸಾಕಷ್ಟು ಈ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದರು. ಮಹಿಳೆಯು ಹಠ ಸಡಿಲಿಸದ ಕಾರಣ ಅವರ ಸಂಧಾನ ವ್ಯರ್ಥವಾಗುತ್ತಿತ್ತು.
ದಿನ ಕಳೆದಂತೆ, ದಂಪತಿ ಹೆಚ್ಚೆಚ್ಚು ಜಗಳವಾಡುತ್ತಿದ್ದರು. ಇದು ಕುಟುಂಬ ಸದಸ್ಯರಿಗೆ ತಲೆನೋವಾಗಿ ಪರಿಣಮಿಸಿತು. ಕೊನೆಗೆ ಕುಟುಂಬ ಸದಸ್ಯರು ತಮ್ಮ ಸಮಾಜದ ಸಭೆಗೆ ಕರೆದರು. ಪತಿ ಮತ್ತು ಪತ್ನಿ ಪ್ರತ್ಯೇಕ ಕೊಠಡಿಗಳಲ್ಲಿ ವಾಸಿಸಲು ಆರಂಭಿಸಿದ ನಂತರ ಸಮಸ್ಯೆ ಗೆ ಯಾವುದೇ ಪರಿಹಾರ ಕಂಡುಕೊಳ್ಳಲಾಗಿಲ್ಲ.
ನಂತರ ಪತಿ ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13 ರ ಅಡಿಯಲ್ಲಿ ವಿಚ್ಛೇದನದ ತೀರ್ಪು ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ವೇಳೆ ಪತ್ನಿ ತನ್ನ ಸೋದರ ಸಂಬಂಧಿಯೊಂದಿಗೆ ತನ್ನ ಗಂಡನ ನಡವಳಿಕೆಯನ್ನು ಇಷ್ಟಪಡುವುದಿಲ್ಲ ಎಂದು ಹೇಳಿಕೊಂಡರು ಆದರೆ ನ್ಯಾಯಾಲಯದಲ್ಲಿ ಅದನ್ನು ವಿವರವಾಗಿ ವಿವರಿಸಲು ಮಹಿಳೆಗೆ ಸಾಧ್ಯವಾಗಲಿಲ್ಲ.