ಸುದ್ದಿ

ಅತ್ಯಾಚಾರಿಗಳಿಗೆ ಪುರುಷತ್ವ ಹರಣ ಶಿಕ್ಷೆ: ಕಠಿಣ ಕ್ರಮಕ್ಕೆ ಇಟಲಿ ಸರ್ಕಾರ ಸಿದ್ಧತೆ!

Share It

ರೋಮ್: ಅತ್ಯಾಚಾರ ಪ್ರಕರಣಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿರುವ ಇಟಲಿ ಸರ್ಕಾರ, ಅತ್ಯಾಚಾರಿಗಳಿಗೆ ಪುರುಷತ್ವಹರಣ ಮಾಡಲು ಚಿಂತನೆ ನಡೆಸಿದೆ. ಈ ಸಂಬಂಧ ಕಾಯ್ದೆ ರೂಪಿಸುವ ಸಲುವಾಗಿ ಕರಡು ಶಾಸನ ತಯಾರಿಗೆ ಸಮಿತಿಯೊಂದನ್ನು ರಚಿಸಲಾಗಿದೆ.

ಈ ಯೋಜನೆಯ ಪ್ರಕಾರ, ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದವರು ರಾಸಾಯನಿಕ ವಿಧಾನದಡಿ ಪುರುಷತ್ವ ಹರಣ ಮಾಡಿಸಿಕೊಂಡರೆ ಅವರ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗುತ್ತದೆ.

ಅಪರಾಧಿಗಳಿಗೆ ಕಾಮೋತ್ತೇಜನಕ್ಕೆ ಕಾರಣವಾಗುವ ಟೆಸ್ಟೋಸ್ಟಿರೋನ್ ಹಾರ್ಮೋನ್‌ ಉತ್ಪಾದನೆಯನ್ನು ಪ್ರತಿಬಂಧಿಸುವ ಚುಚ್ಚುಮದ್ದನ್ನು ನೀಡಲಾಗುತ್ತದೆ. ಇದರಿಂದಾಗಿ ಆ ವ್ಯಕ್ತಿಗೆ ಕಾಮಾಸಕ್ತಿ ಹೋಗುತ್ತದೆ ಎನ್ನಲಾಗಿದೆ.


Share It

You cannot copy content of this page