ಸುದ್ದಿ

ಪೊಲೀಸರಿಂದ ಸುಳ್ಳುಕೇಸ್: ಅಧೀನ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದ್ದ ಖಾಸಗಿ ದೂರಿನ ಮರು ವಿಚಾರಣೆಗೆ ಆದೇಶಿಸಿದ ಹೈಕೋರ್ಟ್

Share It

ಬೆಂಗಳೂರು: ಜೂಜಾಡುತ್ತಿದ್ದಾರೆಂದು ಸುಳ್ಳು ಕೇಸ್ ದಾಖಲಿಸಿದ್ದಲ್ಲದೆ, ವಶಪಡಿಸಿಕೊಂಡ ಹಣಕ್ಕೆ ತಪ್ಪುಲೆಕ್ಕ ತೋರಿಸಿದ್ದ ಆರೋಪ ಸಂಬಂಧ ಮಂಡ್ಯ ಜಿಲ್ಲೆಯ ನಾಗಮಂಗಲ ಮತ್ತು ಕೆ.ಆರ್.ಪೇಟೆ ನಗರ ಠಾಣೆ ಪೊಲೀಸ ಅಧಿಕಾರಿಗಳ ವಿರುದ್ಧ ಸಲ್ಲಿಸಿದ್ದ ಖಾಸಗಿ ದೂರನ್ನು ತಿರಸ್ಕರಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ಪೊಲೀಸರ ವಿರುದ್ಧದ ಖಾಸಗಿ ದೂರಿನ ಮರು ವಿಚಾರಣೆಗೆ ಆದೇಶಿಸಿದೆ.

ಪೊಲೀಸರ ವಿರುದ್ಧ ನಾಗರಾಜು ಎಂಬುವರ ಖಾಸಗಿ ದೂರನ್ನು ಮರು ಸ್ಥಾಪಿಸಿರುವ ಹೈಕೋರ್ಟ್ ಮರು ವಿಚಾರಣೆ ನಡೆಸುವಂತೆ ಜೆಎಂಎಫ್ ಸಿ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಸುಳ್ಳುಪ್ರಕರಣ ದಾಖಲಿಸಿದ್ದ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದ ಪೊಲೀಸರ ವರ್ತನೆ ವಿರುದ್ಧ ಸ್ಥಳೀಯ ಕೋಟ್೯ಗೆ ನಾಗರಾಜು ಎಂಬುವರು ಖಾಸಗಿ ದೂರು ನೀಡಿದ್ದರು. ದೂರು ಸಲ್ಲಿಸುವ ವೇಳೆ ಸುಪ್ರೀಂಕೋರ್ಟ್ ಮಾರ್ಗಸೂಚಿ ಪಾಲಿಸಿಲ್ಲ ಎಂದು ಜೆಎಂಎಫ್ ಸಿ ಕೋಟ್೯ ನಾಗರಾಜು ಅವರ ಖಾಸಗಿ ದೂರನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಸಿವಿಲ್ ಮತ್ತು ಜೆಎಂಎಫ್ ಸಿ ಕೋಟ್೯ ತಿರಸ್ಕರಿಸಿದೆ.

ದೂರು ಸಲ್ಲಿಸುವಾಗ ಎಲ್ಲಾ ಮಾರ್ಗಸೂಚಿ ಪಾಲಿಸಿದ್ದರೂ ನಾಗರಾಜು ಅವರ ಖಾಸಗಿ ದೂರನ್ನು ತಿರಸ್ಕರಿಸಿರುವ ಅಧೀನ ನ್ಯಾಯಾಲಯದ ಕ್ರಮ ನ್ಯಾಯೋಚಿತವಾಗಿಲ್ಲ ಹಾಗಾಗಿ ದೂರನ್ನು ಮರು ಸ್ಥಾಪಿಸಲಾಗುತ್ತಿದೆ ಎಂದು ಆದೇಶದಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ: ಕೆ.ಆರ್.ಪೇಟೆಯ ಸುಭಾಷ್ ನಗರದ ನಿವಾಸಿ ಕೆ.ಟಿ.ನಾಗರಾಜು ಅವರ ಮನೆಗೆ 2019,ಆ.20 ರಂದು ನಾಗಮಂಗಲ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎನ್.ಸುಧಾಕರ ಹಾಗೂ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಶಿವಣ್ಷ ಹಾಗೂ ಮುಖ್ಯಪೇದೆ ಪ್ರಕಾಶ್ ಭೇಟಿ ನೀಡಿ ಜೂಜಾಟ ಆಡುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿರುವುದಾಗಿ ನಾಗರಾಜು ಮತ್ತವರ ಸ್ನೇಹಿತರಾದ ಬೋರೇಗೌಡ,ಚಂದ್ರೇಗೌಡ ಅವರನ್ನು ಪ್ರಶ್ನಿಸಿದ್ದರು.
ಅಲ್ಲದೆ ನಾಗರಾಜು ಮತ್ತವರ ಸ್ನೇಹಿತರನ್ನು ಪೊಲೀಸ್ ಠಾಣೆಗೆ ಕರೆತಂದು ಚಂದ್ರೇಗೌಡನಿಂದ ₹34 ಸಾವಿರ ಹಣ ಪಡೆದು, ದೂರು ದಾಖಲಿಸಿದ್ದರು. ಪೊಲೀಸರ ಸುಳ್ಳು ಕೇಸ್ ವಿರುದ್ಧ 2021ರಲ್ಲಿ ಕೆ.ಆರ್.ಪೇಟೆ ಸಿವಿಲ್ ಮತ್ತು ಜೆಎಂಎಫ್ ಸಿ ಕೋಟ್೯ಗೆ ನಾಗರಾಜು ಎಂಬುವರು ಖಾಸಗಿ ದೂರು ದಾಖಲಿಸಿದ್ದರು.


Share It

You cannot copy content of this page