ಸುದ್ದಿ

ಕಲ್ಲು ನಾಗರಕ್ಕೆ ಹಾಲೆರೆಯಬೇಡಿ ಅನ್ನುತ್ತೀರಾ, ಎಷ್ಟು ಜನ ಸ್ವಾಮೀಜಿಗಳು ಗೋ ಹತ್ಯೆ ವಿರೋಧಿಸಿದ್ದೀರಿ?: -ವಚನಾನಂದ ಶ್ರೀ

Share It

ಹಾವೇರಿ: ಕಲ್ಲು ನಾಗರಕ್ಕೆ ಹಾಲೆರೆಯುವ ಪದ್ದತಿ ಬದಲು ಅನಾಥ ಮಕ್ಕಳಿಗೆ ಹಾಲು ಕೊಡಿ ಎಂಬ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ವಚನಾನಂದ ಸ್ವಾಮಿಜಿ ಕಿಡಿ ಕಾರಿದ್ದಾರೆ

ಹಿಂದೂ ಅಂದರೆ ಶುದ್ಧವಾದ ಜೀವನ ಪದ್ದತಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಕಲ್ಲು ನಾಗರಕ್ಕೆ ಹಾಲೆರೆಯಬೇಡಿ, ಅನಾಥ ಮಕ್ಕಳಿಗೆ ಹಾಲು ಕೊಡಿ ಅಂತಾರೆ. ನೀವು ಮಾಡಿಕೊಂಡು ಹೋಗಿ ಬೇಡ ಅಂದವರು ಯಾರು. ಹಾಲು ಕೊಡೋ ಗೋಮಾತೆ ಹತ್ಯೆ ಮಾಡ್ತಾ ಇದ್ದಾರೆ. ಎಷ್ಟು ಜನ ಸ್ವಾಮೀಜಿಗಳು ಗೋ ಹತ್ಯೆ ವಿರೋಧಿಸಿದ್ದೀರಿ? ಅನಾಥ ಮಕ್ಕಳ ಮೇಲೆ ಕರುಣೆ ಇದ್ದರೆ ಹಾಲು ಕೊಡಿ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಲಿಂಗಾಯತ ಇರಲಿ ವೀರಶೈವ ಇರಲಿ ಒಂದಾಗಿ ಹೋಗಬೇಕು. ಕೆಲವರ ಜಾತಿ ಸರ್ಟಿಪಿಕೇಟ್ ಗಳಲ್ಲಿ ಹಿಂದೂ ಭೌದ್ಧ ಅಂತ ಇದೆ. ಹಿಂದೂ ಜೈನ ಅಂತ ಇದೆ. ಅದೇ ತರ ಹಿಂದೂ ಲಿಂಗಾಯತ, ವೀರಶೈವ ಹಾಗೂ ಲಿಂಗಾಯತರು ಒಂದಾಗಿ ಮೊದಲು. ಒಂದಾಗದೇ ಹೇಗೆ ಪ್ರತ್ಯೇಕ ಧರ್ಮ ಮಾಡಬೇಕು?. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಯಾಕೆ ಸಿಕ್ಕಿಲ್ಲ?. ಕೆಲ ಸ್ವಾಮಿಗಳು ನಾವು ಹಿಂದೂಗಳಲ್ಲ ಅಂತ ಹೇಳ್ತಾರಲ್ಲಾ?. ಹಾಗೆ ಹೇಳುವ ಸ್ವಾಮಿಗಳಿಗೆ ಅವರ ಸರ್ಟಿಫಿಕೇಟ್ ತೋರ್ಸಿ ಅಂತ ಕೇಳಿ ಎಂದರು.


Share It

You cannot copy content of this page