ಸುದ್ದಿ

ಹೈಸ್ಕೂಲ್ ವಿದ್ಯಾರ್ಥಿಯಿಂದ ಮೀಟರ್ ಬಡ್ಡಿ ದಂಧೆ; ಸಾಲಗಾರ ವಿದ್ಯಾರ್ಥಿಗೆ ಚಾಕು ಇರಿತ

Share It

ಹುಬ್ಬಳ್ಳಿ: ನಗರದ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದು ಬಡ್ಡಿ ಕಟ್ಟದ ಇನ್ನೊಬ್ಬ ವಿದ್ಯಾರ್ಥಿಗೆ ಚಾಕು ಇರಿದಿರುವ ಆಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ಪೊಲೀಸರು 6 ಮಂದಿ ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

ಕರ್ಕಿ ಬಸವೇಶ್ವರ ನಗರದ 10ನೇ ತರಗತಿ ವಿದ್ಯಾರ್ಥಿ ಯೊಬ್ಬ ₹10 ಸಾವಿರ ರೂ.ಸಾಲವನ್ನು ವಾರದ ಬಡ್ಡಿ ಲೆಕ್ಕದಲ್ಲಿ ಪಡೆದಿದ್ದನಂತೆ. ಅದರಂತೆ ಪ್ರತಿವಾರ ₹1 ಸಾವಿರ ಬಡ್ಡಿ ಕೊಡುತ್ತಿದ್ದನಂತೆ. ಆದರೆ ಕಳೆದ ಎರಡು ವಾರ ಬಡ್ಡಿ ಕೊಟ್ಟಿರಲಿಲ್ಲ ಇದೇ ಕಾರಣವಾಗಿ 9ನೇ ತರಗತಿ ವಿದ್ಯಾರ್ಥಿ ಸೇರಿ 6 ಮಂದಿ ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ್ದರು. ಈ ವಿಷಯ 10ನೇ ತರಗತಿ ಪಾಲಕರಿಗೆ ಗೊತ್ತಾಗಿ ಸಾಲದ ಹಣ ವಾಪಸ್ ಕೊಡುವುದಾಗಿ ಹೇಳಿದ್ದರಂತೆ.

ಆದರೂ ಸುಮ್ಮನಾಗದ ಅಪ್ರಾಪ್ತರು, ಸಾಲ ಪಡೆದಿದ್ದ 10ನೇ ತರಗತಿ ವಿದ್ಯಾರ್ಥಿಯನ್ನು ಕರೆದು ಬೆದರಿಕೆ ಹಾಕಿದ್ದಾರೆ.ಇದರಿಂದ ರೊಚ್ವಿಗೆದ್ದ ಬಾಲಕ,9ನೇ ತರಗತಿ ಬಾಲಕನಿಗೆ ಚಾಕುವಿನಿಂದ ಇರಿದಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಪೊಲೀಸರು ಚಾಕುವಿನಿಂದ ಇರಿದ ಅಪ್ರಾಪ್ತನನ್ನು ವಶಕ್ಕೆ ಪಡೆದು ಬೆಂಡಿಗೇರಿ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


Share It

You cannot copy content of this page