ಸುದ್ದಿ

ಕೆಎಂಎಫ್‌ನಿಂದ ನಂದಿನಿ ದೇಸಿ ಹಸುವಿನ ತುಪ್ಪ ಮಾರುಕಟ್ಟೆಗೆ

Share It

ಬೆಂಗಳೂರು: ರೈತರ ಜೀವನಾಡಿ ನಂದಿನಿ ಈಗ ದೇಸಿ ಹಸುವಿನ ತುಪ್ಪವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.ಅದರಂತೆ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಟಿ ಹಸುವಿನ ತುಪ್ಪ ತೆಯಾರಿಸಿ ‘ನಂದಿನಿ ದೇಸಿ ತುಪ್ಪ’ವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ನಂದಿನಿ ದೇಸಿ ಹಸುವಿನ ತುಪ್ಪ ಇ ಕಾಮರ್ಸ್ ಅಥವಾ ಆನ್ ಲೈನ್ಕೆಎಂಎಫ್ ಲೈನ್ ಮೂಲಕ ಗ್ರಾಹಕರಿಗೆ ತಲುಪಲಿದೆ.

ಲಭ್ಯವಿರುವ ನಾಟಿ ಹಸುವಿನ ಹಾಲಿನಿಂದ ತುಪ್ಪ ತಯಾರಿಸಿ ‘ನಂದಿನಿ ದೇಸಿ ಹಸುವಿನ ತುಪ್ಪ’ವನ್ನು ಕೆಎಂಎಫ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೊದಲ ಹಂತವಾಗಿ ನಂದಿನಿ ದೇಸಿ ಹಸುವಿನ ತುಪ್ಪ 200 ಮಿ.ಲಿ. ಮತ್ತು 500 ಮಿ.ಲಿ. ಬಾಟಲ್‌ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 500 ಮಿ.ಲಿ. ಬಾಟಲ್‌ಗೆ 900 ರು.ಗಳು ಮತ್ತು 200 ಮಿಲಿ ಬಾಟಲ್‌ ಗೆ 400 ರು. ದರ ನಿಗದಿ ಮಾಡಲಾಗಿದೆ. ದೇಸಿ ಹಸುಗಳಾದ ಶಾಹೀವಾಲ್, ಗಿರ್, ಅಮೃತ್ ಮಹಲ್ ಮತ್ತು ಹಳ್ಳಿಕಾ‌ರ್ ತಳಿಗಳ ಹಾಲು ಬಳಸಲಾಗುತ್ತದೆ. ಈ ಹಾಲಿನಲ್ಲಿ ಸರಾಸರಿ ಶೇ.4.8 ಜಿಡ್ಡಿನ ಅಂಶವಿರುತ್ತದೆ. ದೇಸಿ ತಳಿಯ ಪ್ರತಿ ಲೀ. ಹಾಲಿಗೆ ₹57.85 ದರ ನಿಗದಿಪಡಿಸಲಾಗಿದೆ ಎಂದು ಕೆಎಂಎಫ್ ತಿಳಿಸಿದೆ


Share It

You cannot copy content of this page