ಸುದ್ದಿ

ಭೀಕರ ರಸ್ತೆ ಅಪಘಾತ: ಅಮೆರಿಕಾದಲ್ಲಿ ನಾಲ್ವರು ಭಾರತೀಯರ ದಾರುಣ ಸಾವು

Share It

ಅಮೆರಿಕದ ಟೆಕ್ಸಾಸ್‌ನ ಅಣ್ಣಾ ಪ್ರದೇಶದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ದುರಂತದಲ್ಲಿ ತೆಲಂಗಾಣದ ಮೂವರು ಸೇರಿದಂತೆ ನಾಲ್ವರು ಭಾರತೀಯರು ಸಜೀವವಾಗಿ ದಹನಗೊಂಡಿದ್ದಾರೆ. ಒಟ್ಟು ಐದು ವಾಹನಗಳು ಅಪಘಾತಕ್ಕಿಡಾಗಿದ್ದು ಬೆಂಕಿಯಿಂದ ಧಗ ಧಗಿಸಿದ್ದರಿಂದ ಐವರು ದುರ್ಮರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಮೃತಪಟ್ಟವರನ್ನು ತೆಲಂಗಾಣದ ಆರ್ಯನ್ ರಘುನಾಥ್, ಫಾರೂಕ್ ಶೇಕ್, ಆಂಧ್ರದ ಲೋಕೇಶ್ ಪಾಲಾಚಾರ್ಲ, ತಮಿಳುನಾಡಿನ ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ. ಬೆಂಕಿಯಿಂದ ಮೃತದೇಹಗಳೆಲ್ಲ ಸುಟ್ಟು ಹೋಗಿದ್ದರಿಂದ ಅಧಿಕಾರಿಗಳು ಡಿಎನ್‌ಎ ಪರೀಕ್ಷೆ ಮಾಡಿ ಗುರುತು ಪತ್ತೆಗೆ ಮುಂದಾಗಿದ್ದಾರೆ.ಅಮೆರಿಕದ ಬೆಂಟೊನ್‌ವಿಲ್ಲೆಗೆ ಪ್ರಯಾಣಿಸಲು ನಾಲ್ವರು ಭಾರತೀಯರು ಕಾರ್‌ಪೂಲಿಂಗ್ ಅಪ್ಲಿಕೇಶನ್‌ನಲ್ಲಿ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.

ಅಮೆರಿಕದಲ್ಲೇ ಉನ್ನತ ಶಿಕ್ಷಣ ಪಡೆದಿದ್ದ ನಾಲ್ವರು ಬೇರೆ ಬೇರೆ ಉದ್ಯೋಗದಲ್ಲಿ ಇದ್ದರು. ಹೀಗಾಗಿ ರಜೆಯ ಕಾರಣ ತಮ್ಮ ಸಂಬಂಧಿಗಳನ್ನ ಭೇಟಿಯಾಗಲು ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯ ವಿಷಯ ತಿಳಿದು ಸದ್ಯ ಭಾರತದಲ್ಲಿರುವ ಅವರ ಸಂಬಂಧಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಭಾರತಕ್ಕೆ ಮೃತದೇಹಗಳನ್ನು ತರಲು ಕೇಂದ್ರ ಸರ್ಕಾರದ ಸಹಾಯವನ್ನು ಸಂತ್ರಸ್ತರ ಕುಟುಂಬಗಳು ಕೋರಿವೆ ಎಂದು ಹೇಳಲಾಗಿದೆ.


Share It

You cannot copy content of this page