ಸುದ್ದಿ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ವಿವಿಧ ಕ್ಷೇತ್ರದ 69 ಸಾಧಕರಿಗೆ  ಪ್ರಶಸ್ತಿ ಗರಿ

Share It

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ-೨೦೨೪ ಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಿದೆ.

ನವೆಂಬರ್ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ. 69 ಸಾಧಕರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ.

ಈ ವರ್ಷ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ-50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅದರಲ್ಲಿ 69 ಮಂದಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ. 100 ಮಂದಿ ಸಾಧಕರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ

  • ಶಿಲ್ಪಕಲೆ: ಬಸವರಾಜ್ ಬಡಿಗೇರ, ಅರುಣ್ ಯೋಗಿರಾಜ್
  • ಚಿತ್ರಕಲೆ: ಪ್ರಭು ಹರಸೂರು
  • ಕರಕುಶಲ: ಚಂದ್ರಶೇಖರ ಸಿರಿವಂತೆ (ಹಸೆಚಿತ್ತಾರ)
  • ಬಯಲಾಟ: ನಾರಾಯಣಪ್ಪ ಶಿಳ್ಳೇಕ್ಯಾತ
  • ಜಾನಪದ: ನರಸಿಂಹಲು
  • ಚಲನಚಿತ್ರ/ ಕಿರುತೆರೆ: ಹೇಮಾ ಚೌದರಿ, ಎಂ. ಎಸ್‌. ನರಸಿಂಹಮೂರ್ತಿ
  • ಸಂಗೀತ : ಪಿ. ರಾಜಗೋಪಾಲ, ಎ. ಎನ್‌. ಸದಾಶಿವಪ್ಪ
  • ನೃತ್ಯ: ವಿದುಷಿ ಲಲಿತಾ ರಾವ್
  • ಆಡಳಿತ: ಎಸ್. ವಿ ರಂಗನಾಥ್
  • ವೈದ್ಯಕೀಯ: ಡಾ. ಜಿ. ಬಿ. ಬಿಡಿನಹಾಳ, ಡಾ. ಮೈಸೂರು ಸತ್ಯನಾರಾಯಣ, ಡಾ. ಲಕ್ಷ್ಮಣ್ ಹನುಮಪ್ಪ ನಾಯಕ್
  • ಸಮಾಜ ಸೇವೆ: ವೀರಸಂಗಯ್ಯ, ಹೀರಾಚಂದ್ ವಾಗ್ತಾರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾ‌ರ್
  • ಸಂಕೀರ್ಣ: ಹುಲಿಕಲ್ ನಟರಾಜ, ಡಾ. ಹೆಚ್. ಆರ್. ಸ್ವಾಮಿ, ಆ.ನ ಪ್ರಹ್ಲಾದ ರಾವ್, ಕೆ. ಅಜೀತ್ ಕುಮಾ‌ರ್ ರೈ, ಇರ್ಫಾನ್ ರಜಾಕ್ (ವಾಸ್ತುಶಿಲ್ಪ), ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ
  • ಹೊರದೇಶ-ಹೊರನಾಡು: ಕನ್ನಯ್ಯ ನಾಯ್ಡು, ಡಾ. ತುಂಬೆ ಮೊಹಿಯುದ್ದೀನ್, ಚಂದ್ರಶೇಖರ ನಾಯಕ್
  • ಪರಿಸರ: ಕೇಶವ್ ಹೆಗಡೆ, ಸೀತಾರಾಮ ತೋಳ್ಳಾಡಿ
  • ರಂಗಭೂಮಿ: ಸರಸ್ವತಿ ಜುಲೈಕ ಬೇಗಂ, ಓಬಳೇಶ್ ಹೆಚ್. ಬಿ., ಭಾಗ್ಯಶ್ರೀ ರವಿ, ಡಿ.ರಾಮು, ಜನಾರ್ಧನ್ ಹೆಚ್. (ಜನ್ನಿ), ಹನುಮಾನದಾಸ ವ. ಪವಾರ (ಢಗಳ ಚಂದ)
  • ಸಾಹಿತ್ಯ: ಬಿ. ಟಿ. ಲಲಿತಾ ನಾಯಕ್, ಅಲ್ಲಮಪ್ರಭು ಬೆಟ್ಟದೂರು, ಡಾ.ಎಂ. ವೀರಪ್ಪ ಮೊಯ್ಲಿ, ಹನುಮಂತರಾವ್ ದೊಡ್ಡಮನಿ, ಡಾ. ಬಾಳಾಸಾಹೇಬ್ ಲೋಕಾಪುರ, ಬೈರಮಂಗಲರಾಮೇಗೌಡ, ಡಾ. ಪ್ರಶಾಂತ್ ಮಾಡ್ತಾ
  • ಶಿಕ್ಷಣ: ಡಾ. ವಿ. ಕಮಲಮ್ಮ ಡಾ. ರಾಜೇಂದ್ರ ಶೆಟ್ಟಿ, ಡಾ. ಪದ್ಮಾಶೇಖ‌ರ್
  • ಕ್ರೀಡೆ: ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್ (ಹಾಕಿ), ಗೌತಮ್ ವರ್ಮ, ಆರ್. ಉಮಾದೇವಿ (ಬಿಲಿಯಡ್ಸ್)

Share It

You cannot copy content of this page