ಸುದ್ದಿ

ಕನ್ನಡ,ಕನ್ನಡಿಗರ ಹೀಯಾಳಿಸುವುದು ನಾಡದ್ರೋಹ: ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ: – ಸಿಎಂ

Share It

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡ, ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ನಾಡದ್ರೋಹ, ಅಂತಹವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಕನ್ನಡ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಮಾತನಾಡಿದ ಸಿಎಂ, ಕನ್ನಡ ಯಾರು ಸರಿಯಾಗಿ ಮಾತಾನಾಡುವುದಿಲ್ಲ ಅಂತಹವರಿಗೆ ಕನ್ನಡ ಕಲಿಸುವ ಕೆಲಸ ಆಗ್ತಿದೆ. ನಾವೆಲ್ಲರೂ ಕನ್ನಡಿಗರಾಗಬೇಕು. ದುರಾಭಿಮಾನ ಇರಬಾರದು. ಅಭಿಮಾನ ಇರಬೇಕು. ಬೇರೆ ರಾಜ್ಯಗಳಲ್ಲಿ ದುರಾಭಿಮಾನ ಇರುತ್ತೆ. ಹಾಗೆ ಇರಬಾರದು. ಯಾರು ಕನ್ನಡ ಮಾತನಾಡುವುದಕ್ಕೆ ಬರೊಲ್ಲಾ ಅಂತ ಜನರಿಗೆ ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು. ಇಂದು ನಾವೆಲ್ಲಾ ಕನ್ನಡಿಗರಾಗಿರುತ್ತೇವೆ. ವ್ಯವಹಾರದಲ್ಲಿ ಕನ್ನಡಿಗರಾಗಿರುತ್ತೇವೆ ಎಂದು ಶಪಥ ಮಾಡೋಣಾ ಎಂದು ಕರೆ ನೀಡಿದರು.


Share It

You cannot copy content of this page