ಸುದ್ದಿ

ಹೊರಗುತ್ತಿಗೆ ನೌಕರರಿಗೂ ಮಾತೃತ್ವ ರಜೆ ಮತ್ತು ರಜೆಯ ನಂತರವೂ ಉದ್ಯೋಗ ಮುಂದುವರೆಸುವಿಕೆ ಅನ್ವಯ: ಹೈಕೋರ್ಟ್

Share It

ಧಾರವಾಡ: ಹೊರಗುತ್ತಿಗೆ ಕೆಲಸಗಾರರಿಗೂ ಮಾತೃತ್ವ ರಜೆ ಅನ್ವಯಿಸುತ್ತದೆ ಮತ್ತು ಅಂತಹ ರಜೆಯ ನಂತರವೂ ಅವರ ಉದ್ಯೋಗ ಮುಂದುವರೆಯುತ್ತದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಹಿಳೆಯೊಬ್ಬರು ತನ್ನ ಮಾತೃತ್ವ ರಜೆ ಮುಗಿಸಿ ಬರುವಷ್ಟರಲ್ಲಿ ಮತ್ತೊಬ್ಬರನ್ನು ಕೆಲಸಕ್ಕೆ ತೆಗೆದುಕೊಂಡು ಹಿಂಬಾಕಿಯನ್ನೂ ಪಾವತಿಸದೇ ಸತಾಯಿಸುತ್ತಿದ್ದ ಕೃಷಿ ಇಲಾಖೆ ಅಧಿಕಾರಿಗಳಿಗೆ ಛೀಮಾರಿ ಹಾಕಿರುವ ಹೈಕೋರ್ಟ್, ಮಾತೃತ್ವ ರಜೆ ಸೌಲಭ್ಯಗಳನ್ನು ನೀಡುವಂತೆ ಹಾಗೂ ಆಕೆಯನ್ನು ಉದ್ಯೋಗದಲ್ಲಿ ಮುಂದುವರೆಸುವಂತೆ ನಿರ್ದೇಶಿಸಿದೆ.

ಕಳೆದ ಹತ್ತು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಿ, ಮಾತೃತ್ವ ರಜೆ ಮೇರೆಗೆ ತೆರಳಿದ ನಂತರ ಉದ್ಯೋಗದಿಂದ ಕೈಬಿಟ್ಟಿರುವ ಕೃಷಿ ಇಲಾಖೆಗೆ ತನ್ನನ್ನು ಮರಳಿ ಉದ್ಯೋಗಕ್ಕೆ ಸೇರಿಸಿಕೊಳ್ಳುವಂತೆ ಹಾಗೂ ಮಾತೃತ್ವ ರಜೆಯ ಸೌಲಭ್ಯಗಳನ್ನು ನೀಡಲು ನಿರ್ದೇಶಿಸುವಂತೆ ಕೋರಿ ಚಾಂದ್ ಬಿ ಬಳಿಗಾರ ಎಂಬುವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರಿದ್ದ ಪೀಠ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರೂ ಮಹಿಳೆಗೆ ಮಾತೃತ್ವ ರಜೆ ನೀಡಬೇಕು. ಅಲ್ಲದೇ ಅವರನ್ನು ಮರಳಿ ಉದ್ಯೋಗದಲ್ಲಿ ಮುಂದುವರಿಸಬೇಕು ಎಂದು ಆದೇಶ ನೀಡಿದೆ. ಜತೆಗೆ ಅರ್ಜಿದಾರರಿಗೆ ಪ್ರಕರಣ ವೆಚ್ಚವಾಗಿ 25 ಸಾವಿರ ರೂಪಾಯಿ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಚಾಂದ್‌ ಬಿ ಬಳಿಗಾರ ಎಂಬುವವರು 2014 ರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅಕೌಂಟೆಂಟ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿಂದ 2023 ರವರೆಗೂ ಕೆಲಸ ಮಾಡಿದ್ದರು. ಆ ನಂತರ ಅವರು ಮಾತೃತ್ವ ರಜೆಗಾಗಿ ಅರ್ಜಿ ಕೊಟ್ಟು ತೆರಳಿದ್ದರು. ಅವರು ಮಾತೃತ್ವ ರಜೆ ಮುಗಿಸಿ ವಾಪಸ್‌ ಬರುವಷ್ಟರಲ್ಲಿ ಅವರ ಸ್ಥಾನಕ್ಕೆ ಬೇರೆಯವರನ್ನು ಇಲಾಖೆ ನೇಮಕ ಮಾಡಿಕೊಂಡಿತ್ತು.
ಈ ವಿಷಯವನ್ನು ವಿಜಯನಗರ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ನ್ಯಾಯಕೋರಿ ಚಾಂದ್‌ಬಿ ಅವರು ಧಾರವಾಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ತನ್ನ ತೀರ್ಪಿನ ಆರಂಭದಲ್ಲೇ ಸರ್ಕಾರಿ ಅಧಿಕಾರಿಗಳ ನಿರ್ಲಜ್ಜ ನಡೆಯನ್ನು ಅತ್ಯಂತ ಕಟುವಾಗಿ ಟೀಕಿಸಿದೆ.
The State and its instrumentalities, who are excepted to act as “model employers” are finding one after the other reason not only to brazenly flout the constitutional mandate, which they are obligated to uphold and implement in the process of public employment, but also have systematically engaged, to say the least, in conscious exploitation and abuse of constitutional and statutory rights conferred on the citizens seeking public employment. Present case is a classic example of such brazen act. Stance adopted by the State and its instrumentalities, when questioned, is making bold in defending its action with its usual leitmotif of complete denial of existence of privity of contract and relationship of employer and employee, thereby leaving the employee at lurch without any statutory protection even after having made them to work for over a decade. This after series of cautions and deprecations by the Apex Court and various High Courts all of which has fallen as its deaf ear.
(WRIT PETITION NO.102060 OF 2024(S-RES)

ಮೂಲ: Law Time


Share It

You cannot copy content of this page