ರಾಯಚೂರು: ಶಿಕ್ಷಕಿಗೆ ಅಸಭ್ಯವಾಗಿ ಮೆಸೇಜ್ ಮಾಡಿ ಮಂಚಕ್ಕೆ ಕರೆದ ಶಿಕ್ಷಕನಿಗೆ ಜನರೇ ಧರ್ಮದೇಟು ನೀಡಿ ಸಭ್ಯತೆಯ ಪಾಠ ಕಲಿಸಿದ್ದಾರೆ. ಈ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ.
ತನ್ನ ಶಾಲೆಯ ಅತಿಥಿ ಶಿಕ್ಷಕಿಗೆ ಅಸಹ್ಯವಾಗಿ
ಮೆಸೇಜ್ ಮಾಡಿ, ಮಂಚಕ್ಕೆ ಕರೆದ ಹಿನ್ನೆಲೆಯಲ್ಲಿ ಶಿಕ್ಷಕಿಯ ಸಂಬಂಧಿಕರು ಶಿಕ್ಷಕನಿಗೆ ಬಟ್ಟೆ ಹರಿದು
ಹೋಗುವಂತೆ ಥಳಿಸಿ ಕಾಲಿಗೆ ಬೀಳಿಸಿ ಕ್ಷಮೆ
ಕೇಳುವಂತೆ ಮಾಡಿದ್ದಾರೆ. ಸದ್ಯ ಶಿಕ್ಷಕನ
ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಶಾಲಾ ಅತಿಥಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಸಹ ಶಿಕ್ಷಕ ಮೆಹಬೂಬ್ ಅಲಿ ಅವರು ತಮ್ಮದೇ ಶಾಲೆಯ ಅತಿಥಿ ಶಿಕ್ಷಕಿಗೆ ಅಸಹ್ಯವಾಗಿ ಮೆಸೇಜ್ ಮಾಡಿ, ಮಂಚಕ್ಕೆ ಕರೆದಿದ್ದರು. ಈ ಹಿನ್ನೆಲೆ ನಿನ್ನೆ ಶಾಲೆ ಬಳಿ ಬಂದಿದ್ದ ಶಿಕ್ಷಕಿ ಸಂಬಂಧಿಕರು ಮೆಹಬೂಬ್ ಅಲಿ ಮೈ ಮೇಲಿದ್ದ ಬಟ್ಟೆ ಹರಿಯುವಂತೆ ಧರ್ಮದೇಟು ನೀಡಿ ಸಭ್ಯತೆಯ ಪಾಠ ಕಲಿಸಿದ್ದಾರೆ.
ಸದ್ಯ ಮೆಹಬೂಬ್ ಅಲಿ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆಯಾಚನೆ ಮಾಡಿದ್ದಾರೆ. ಕೊನೆಗೆ ತಪ್ರೊಪ್ಪಿ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. ಶಿಕ್ಷಕ ಕ್ಷಮೆಯಾಚಿಸಿದ್ದರಿಂದ ಪೊಲೀಸರಿಗೆ ದೂರು ನೀಡದೇ ಶಿಕ್ಷಕಿ ಸುಮ್ಮನಾಗಿದ್ದಾರೆ. ಇದೀಗ ಶಿಕ್ಷಕ, ಶಿಕ್ಷಕಿ ಕಾಲಿಗೆ ಬಿದ್ದು ಕ್ಷಮೆ ಕೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.