ಸುದ್ದಿ

ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಆರೋಪಿ ಸಂಜಯ್ ರಾಯ್ ಹೆಣ್ಣು ಬಾಕ ಎಂಬುದು ತನಿಖೆಯಲ್ಲಿ ಬಯಲು!

Share It

ಕೋಲ್ಕತ್ತಾ: ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸಂಜಯ್ ರಾಯ್ ಬಗ್ಗೆ ಪೊಲೀಸ್ ತನಿಖೆಯಿಂದ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ !

ಆರೋಪಿ ಸಂಜತ್ ರಾಯ್ ಅಶ್ಲೀಲ ಚಿತ್ರ ವ್ಯಸನಿ ಎಂಬುದು ಆತನ ಮೊಬೈಲ್ ಪರಿಶೀಲಿಸಿದಾಗ ಕಂಡು ಬಂದಿದೆ. ಆತನ ಮೊಬೈಲ್ ನಲ್ಲಿ ಅತೀ ಹೆಚ್ಚು ಪೋರ್ನ್ ವಿಡಿಯೋಗಳಿವೆ. ಅಂತಹ ವಿಷಯಗಳನ್ನು ನೋಡುವುದು ಅಸಹಜವಾಗಿದ್ದು ಆರೋಪಿಯ ಮನಸ್ಥಿತಿಯ ಬಗ್ಗೆ ಅಚ್ಚರಿಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಯ್ ನಾಲ್ಕು ಮದುವೆಯಾಗಿದ್ದು ಆತ ಹೆಣ್ಣುಬಾಕ ಎಂದು ತಿಳಿದುಬಂದಿದೆ. ಆರೋಪಿಯ ಮಾನಸಿಕ ವಿಕೃತಿಗೆ ಬೇಸತ್ತ ಮೂವರು ಪತ್ನಿಯರು ಮನೆ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಆರೋಪಿ 33 ವರ್ಷದ ಸಂಜಯ್ ರಾಯ್ 2019ರಲ್ಲಿ ಕೋಲ್ಕತ್ತಾ ಪೊಲೀಸ್‌ಗೆ ನಾಗರಿಕ ಸ್ವಯಂಸೇವಕನಾಗಿ ಸೇರಿದ್ದು ಆಸ್ಪತ್ರೆಯ ಔಟ್‌ಪೋಸ್ಟ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದನು. ಕ್ಯಾಂಪಸ್‌ನ ಕಟ್ಟಡಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದನು. ಇನ್ನು ಆಸ್ಪತ್ರೆ ಸಿಬ್ಬಂದಿ ಜತೆ ಸಣ್ಣಪುಟ್ಟ ಕೆಲಸ ಮಾಡುತ್ತಾ ಸ್ಥಳೀಯ ಪಾರ್ಕಿಂಗ್, ಟ್ರಾಫಿಕ್ ನಿರ್ವಹಣೆ ಮಾಡುತ್ತಿದ್ದನು. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದರೆ ಹತ್ತಿರದ ನರ್ಸಿಂಗ್ ಹೋಂಗಳಲ್ಲಿ ಬೆಡ್ ಸಿಗುತ್ತದೆ ಎಂದು ರೋಗಿಗಳ ಸಂಬಂಧಿಕರಿಗೆ ವ್ಯವಸ್ಥೆ ಮಾಡಿ ಹಣ ಪಡೆಯುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.


Share It

You cannot copy content of this page