ಸುದ್ದಿ

ಅಪ್ರಾಪ್ತೆ ಅತ್ಯಾಚಾರಿ ಮತ್ತು ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋಟ್೯

Share It

ಸಿಲಿಗುರಿ: ಶಾಲಾ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಹೆಚ್ವುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶರಾದ ಅನಿತಾ ಮೆಹ್ರೋತ್ರಾ ಮಾಥುರ್ ಅವರು ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಅಪರಾಧಿ ಎಂ.ಡಿ.ಅಬ್ಬಾಸ್ ಗೆ ಶನಿವಾರ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಸಿಲಿಗುರಿಯ ಮಾತಿಗಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2023ರ ಆ.21ರಂದು ಈ ನೀಚಕೃತ್ಯ ನಡೆದಿತ್ತು. ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಅಪಹರಿಸಿ ಅತ್ಯಾಚಾರ ನಡೆಸಿದ ಅಪರಾಧಿ  ಅಬ್ಬಾಸ್ ಬಳಿಕ ಬಾಲಕಿಯನ್ನು ಸಾಯಿಸಿದ್ದ. ಈ ಕೃತ್ಯ ನಡೆದ 6 ಗಂಟೆಗಳ ಒಳಗೆ ಪೊಲೀಸರು ಅಪರಾಧಿ ಎಂ.ಡಿ.ಅಬ್ಬಾಸ್ ನನ್ನು ಬಂಧಿಸಿದ್ದರು.


Share It

You cannot copy content of this page