ಸುದ್ದಿ

ಮುಡಾ ಸೈಟ್ ಕಬಳಿಕೆ ಹಗರಣ ಬೆನ್ನಲ್ಲೆ ಸಿಎಂ ವಿರುದ್ಧ ದಲಿತರ ಸೈಟ್ ಕಬಳಿಕೆ ಆರೋಪ ಮಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

Share It

ಬೆಂಗಳೂರು: ಮುಡಾ ಸೈಟ್ ಕಬಳಿಕೆ ಆರೋಪ ಹಗರಣ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದ ಮೇಲಿರುವಾಗಲೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಭೂ ಕಬಳಿಕೆ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮೂಡದಿಂದ ಹಂಚಿಕೆ ಆಗಿದ್ದ ದಲಿತರೊಬ್ಬರ ನಿವೇಶನ ಕಬಳಿಸಿ ಮನೆ ಕಟ್ಟಿಸಿದ್ದಾರೆ. ಬಳಿಕ ಆ ಮನೆಯನ್ನು ಮಾರುವ ನಾಟಕ ಆಡಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದರು.

ಈ ರಾಜ್ಯಕ್ಕೆ ಉಪ ಮುಖ್ಯಮಂತ್ರಿ ಆಗಿದ್ದಾಗ ನೀವು ಯಾರ ಜಾಗವನ್ನು ಲಪಟಾಯಿಸಿ ಮನೆ ಕಟ್ಟಿದಿರಿ ಸ್ವಾಮಿ? ಅದರ ದಾಖಲೆ ಬೇಕಾ ನಿಮಗೆ? ದಲಿತರಿಗೆ ಮೂಡದಿಂದ ಹಂಚಿಕೆ ಆಗಿದ್ದ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದವರು ಯಾರು ಎಂಬುದನ್ನು ಸ್ವಲ್ಪ ಹೇಳುತ್ತೀರಾ? 15 ನಿವೇಶನ ಬರೆಸಿಕೊಂಡಿರುವುದು ಅಷ್ಟೇ ಅಲ್ಲ, ಅದಕ್ಕೆ ಮೀರಿದ ಹಗರಣಗಳನ್ನು ಇವರು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದರು.


Share It

You cannot copy content of this page