ಸುದ್ದಿ

ಬಹುಕಾಲದ ಗೆಳತಿ ಜೊತೆ ಸಪ್ತಪದಿ ಸುಳಿವು ಕೊಟ್ಟ ನಟ ಡಾಲಿ: ಇಬ್ಬರ ಮುದ್ದಾದ ಫೋಟೋ ವೈರಲ್

Share It

ನಟ,ನಿರ್ದೇಶಕ,ಗೀತರಚನೆಕಾರ ಡಾಲಿ ಧನಂಜಯ್ ಅವರು ತಮ್ಮ ಬಹುಕಾಲದ ಗೆಳತಿ, ವೃತ್ತಿಯಲ್ಲಿ ವೈದ್ಯೆಯಾಗಿರುವ ಧನ್ಯತಾ ಜೊತೆ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ.

ಇಬ್ಬರು ಮುಂದಿನ ವರ್ಷ ಫೆಬ್ರವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಫೆಬ್ರವರಿ 16 ರಂದು ಮೈಸೂರಿನ ಎಕ್ಸಿಬಿಷನ್‌ ಗ್ರೌಂಡ್ನಲ್ಲಿ ನಟರಾಕ್ಷಸ ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ನಡೆಯಲಿದೆ. ಅದ್ಧೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ. ಬೆಳಗ್ಗೆ ಮಾಂಗಲ್ಯ ಧಾರಣೆ, ನಂತರ ಅದೇ ದಿನ ಅದೇ ಗೌಂಡ್‌ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.

ನಟ ಡಾಲಿ ಮತ್ತು ಧನ್ಯತಾ ಇಬ್ಬರಿಗೂ ಅನೇಕ ವರ್ಷಗಳಿಂದ ಪರಿಚಯ. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ, ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಕೂಡ ಓದಿದ್ದು ಮೈಸೂರಿನಲ್ಲಿ. ಸದ್ಯ ಶೇರ್ ಮಾಡಿರುವ ವಿಡಿಯೋದಲ್ಲಿ ಡಾಲಿ ಸುಂದರವಾಗಿ ಕಂಗೊಳಿಸುತ್ತಿದ್ದಾರೆ.

ಕವಿ ದ.ರಾ.ಬೇಂದ್ರೆ ಅವರ ಕವನ ಹೇಳುತ್ತಾ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ ಧನಂಜಯ. ಧನ್ಯತಾ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಇಬ್ಬರ ಮುದ್ದಾದ ವಿಡಿಯೋಗೆ ಅಭಿಮಾನಿಗಳಿಂದ ಪ್ರೀತಿಯ ಶುಭಾಶಯಗಳು ಹರಿದು ಬರುತ್ತಿವೆ.


Share It

You cannot copy content of this page